ಡುಂಡಿರಾಜರ ಹನಿಗವನ ಮಳೆ!!!⛈🌧


😀😀ಬ್ಯಾಂಕಿನಲ್ಲಿ 😀😀
ಕ್ಯಾಶ್ ಕೌಂಟರಿನ
ಚೆಲುವೆಯ
ಸೌಂದರ್ಯದತ್ತ
ಹರಿದು ನೋಟ,
ಗಮನಿಸಲಿಲ್ಲ
ಅವಳು ಕೊಟ್ಟ
ಹರಿದ ನೋಟ!
😂😂😂😂



😀😀ಪತ್ರೆ 😀😀
ಶನಿದೇವರಿಗೆ ಶಮೀ ಪತ್ರೆ
ವಿಷ್ಣುವಿಗೆ ತುಳಸಿ ಪತ್ರೆ
ಈಶ್ವರನಿಗೆ ಪ್ರಿಯವಂತೆ
ಬಿಲ್ವ ಪತ್ರೆ
ಯಮನಿಗೆ ಸರಕಾರಿ
ಆಸ್-ಪತ್ರೆ
😉😀😀


😀😀ಅವಶ್ಯ 😀😀
ನದಿ ದಾಟಲು
ತೆಪ್ಪ ಇರಬೇಕು.
ಸಂಸಾರ
ಶರಧಿ ದಾಟಲು
ತೆಪ್ಪಗಿರಬೇಕು 😷🤐😜


😀😀ಚಿಂತೆ 😀😀
ಬಡವರಿಗೆ ಸದಾ
ಹೊಟ್ಟೆ ಹೊರೆವ
ಚಿಂತೆ.
ಶ್ರೀಮಂತರಿಗೆ
ಹೊಟ್ಟೆ
ಹೊರುವ ಚಿಂತೆ.😂

😀😀ಅಧ್ಯಕ್ಷ ಭಾಷಣ 😀😀
ಅದ್ಭುತವಾಗಿತ್ತು
ಅಧ್ಯಕ್ಷರ ಭಾಷಣ
ವಿಷಯ,  ಶೈಲಿ, ಭಾಷೆ
ಎಲ್ಲವೂ ಚೆನ್ನ.
ಆದರೂ ನೋಡಬೇಕಾಗಿತ್ತು
ಒಮ್ಮೆಯಾದರೂ
ತಮ್ಮ ವಾಚನ್ನ😂😂😂

😀😀ಭಾಷಣ 😀😀
ಆರಂಭದಲ್ಲಿ
ಹೇಳುತ್ತಾರೆ
ಎರಡೇ ಎರಡು ಮಾತು.
ಮುಗಿಸುವಾಗ
ಆಗುವುದೇ ಬೇರೆ
ಎರಡೂ ಕಿವಿ ತೂತು! 😂😂


😀😀ನುಡಿದರೆ 😀😀
ಗೆಳೆಯಾ ಒಪ್ಪಿದೆ,
ನೀನು ನುಡಿದರೆ
ಮುತ್ತಿನ ಹಾರದಂತೆ.
ಆದರೂ ತುಸು
ಎಚ್ಚರ ವಹಿಸು
ಎಂಜಲು ಹಾರದಂತೆ! 😁😂

😀😀ಆದರೂ 😀😀
ವಯಸ್ಸಾದರೂ
ಹೆಂಗಸರು
ಗಂಡಸರನ್ನು ಕಂಡರೆ
ನಾಚ್ಕೊತಾರೆ.
ಗಂಡಸರು
ಬೋಳು ತಲೆ
ಬಾಚ್ಕೋತಾರೆ !😜😀😀

Comments

Post a Comment

Popular posts from this blog

Year 2020 isn’t Twenty 20, Its a Test match; Play it like ‘Rahul The Wall Dravid’!

The Sales Man!! A small story of a Big sale....

Use things and LOVE people(and not vise versa)!!