Posts

Showing posts from August, 2017

ಡುಂಡಿರಾಜರ ಹನಿಗವನ ಮಳೆ!!!⛈🌧

😀😀 ಬ್ಯಾಂಕಿನಲ್ಲಿ 😀😀 ಕ್ಯಾಶ್ ಕೌಂಟರಿನ ಚೆಲುವೆಯ ಸೌಂದರ್ಯದತ್ತ ಹರಿದು ನೋಟ, ಗಮನಿಸಲಿಲ್ಲ ಅವಳು ಕೊಟ್ಟ ಹರಿದ ನೋಟ! 😂😂😂😂 😀😀 ಪತ್ರೆ 😀😀 ಶನಿದೇವರಿಗೆ ಶಮೀ ಪತ್ರೆ ವಿಷ್ಣುವಿಗೆ ತುಳಸಿ ಪತ್ರೆ ಈಶ್ವರನಿಗೆ ಪ್ರಿಯವಂತೆ ಬಿಲ್ವ ಪತ್ರೆ ಯಮನಿಗೆ ಸರಕಾರಿ ಆಸ್-ಪತ್ರೆ 😉😀😀 😀😀 ಅವಶ್ಯ 😀😀 ನದಿ ದಾಟಲು ತೆಪ್ಪ ಇರಬೇಕು. ಸಂಸಾರ ಶರಧಿ ದಾಟಲು ತೆಪ್ಪಗಿರಬೇಕು 😷🤐😜 😀😀 ಚಿಂತೆ 😀😀 ಬಡವರಿಗೆ ಸದಾ ಹೊಟ್ಟೆ ಹೊರೆವ ಚಿಂತೆ. ಶ್ರೀಮಂತರಿಗೆ ಹೊಟ್ಟೆ ಹೊರುವ ಚಿಂತೆ.😂 😀😀 ಅಧ್ಯಕ್ಷ ಭಾಷಣ 😀😀 ಅದ್ಭುತವಾಗಿತ್ತು ಅಧ್ಯಕ್ಷರ ಭಾಷಣ ವಿಷಯ,  ಶೈಲಿ, ಭಾಷೆ ಎಲ್ಲವೂ ಚೆನ್ನ. ಆದರೂ ನೋಡಬೇಕಾಗಿತ್ತು ಒಮ್ಮೆಯಾದರೂ ತಮ್ಮ ವಾಚನ್ನ😂😂😂 😀😀 ಭಾಷಣ 😀😀 ಆರಂಭದಲ್ಲಿ ಹೇಳುತ್ತಾರೆ ಎರಡೇ ಎರಡು ಮಾತು. ಮುಗಿಸುವಾಗ ಆಗುವುದೇ ಬೇರೆ ಎರಡೂ ಕಿವಿ ತೂತು! 😂😂 😀😀 ನುಡಿದರೆ 😀😀 ಗೆಳೆಯಾ ಒಪ್ಪಿದೆ, ನೀನು ನುಡಿದರೆ ಮುತ್ತಿನ ಹಾರದಂತೆ. ಆದರೂ ತುಸು ಎಚ್ಚರ ವಹಿಸು ಎಂಜಲು ಹಾರದಂತೆ! 😁😂 😀😀 ಆದರೂ 😀😀 ವಯಸ್ಸಾದರೂ ಹೆಂಗಸರು ಗಂಡಸರನ್ನು ಕಂಡರೆ ನಾಚ್ಕೊತಾರೆ. ಗಂಡಸರು ಬೋಳು ತಲೆ ಬಾಚ್ಕೋತಾರೆ !😜😀😀